ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಕಟ್ಟುನಿಟ್ಟಿನ ರೂಲ್ಸ್: ಮೊಬೈಲ್ ಸಂಪೂರ್ಣ ಬ್ಯಾನ್, ತಪ್ಪು ಮಾಡಿದರೆ ಶಿಕ್ಷಕರೇ ನೇರ ಹೊಣೆ

ವಿದ್ಯಾರ್ಥಿಗಳ ಜೀವನದ ಬಹುಮುಖ್ಯ ಘಟ್ಟವಾದ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆ-1 ರ 2026ನೇ ಸಾಲಿನ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಭರ್ಜರಿ ಸಿದ್ಧತೆ ನಡೆಸಿದೆ. ಏಪ್ರಿಲ್ 5, 2026 ರಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಮೌಲ್ಯಮಾಪನ ಕಾರ್ಯ ಶುರುವಾಗಲಿದ್ದು, ಈ ಬಾರಿ ಯಾವುದೇ ಅಕ್ರಮ ಅಥವಾ ಲೋಪವಾಗದಂತೆ ತಡೆಯಲು ಮಂಡಳಿಯು ಖಡಕ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಜಿಲ್ಲಾ ಉಪನಿರ್ದೇಶಕರು ಹಾಗೂ ಮೌಲ್ಯಮಾಪಕರು ಪಾಲಿಸಲೇಬೇಕಾದ ಈ ಬಾರಿಯ ಕಠಿಣ ನಿಯಮಗಳೇನು? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ:

Karnataka SSLC Evaluation 2026 Guidelines:

ಕೇಂದ್ರದೊಳಗೆ ಮೊಬೈಲ್ ಫೋನ್ ಸಂಪೂರ್ಣ ಬ್ಯಾನ್: ಈ ಬಾರಿಯ ಅತ್ಯಂತ ಪ್ರಮುಖ ನಿಯಮವೆಂದರೆ ಮೊಬೈಲ್ ನಿಷೇಧ. ಮೌಲ್ಯಮಾಪನ ಕೇಂದ್ರದೊಳಗೆ ಶಿಕ್ಷಕರು ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಮೌಲ್ಯಮಾಪಕರು ತಮ್ಮ ಮೊಬೈಲ್‌ಗಳನ್ನು ಕಡ್ಡಾಯವಾಗಿ ಜಂಟಿ ಮುಖ್ಯ ಮೌಲ್ಯಮಾಪಕರಿಗೆ ಒಪ್ಪಿಸಬೇಕು. ಆ ಮೊಬೈಲ್‌ಗಳನ್ನು ಉಪ ಮುಖ್ಯ ಮೌಲ್ಯಮಾಪಕರ ವಶದಲ್ಲಿ ಭದ್ರವಾಗಿ ಇಡಲಾಗುತ್ತದೆ.

ತಪ್ಪು ಮಾಡಿದರೆ ಶಿಕ್ಷಕರೇ ನೇರ ಹೊಣೆ (Zero Tolerance): ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವಂತಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಜೆರಾಕ್ಸ್ (Photocopy) ಪ್ರತಿ ಪಡೆದಾಗ, ಅದರಲ್ಲಿ ಅಂಕಗಳ ವ್ಯತ್ಯಾಸ ಅಥವಾ ಮೌಲ್ಯಮಾಪನದ ದೋಷ ಕಂಡುಬಂದರೆ, ಮೌಲ್ಯಮಾಪನ ಕೇಂದ್ರದ ವ್ಯವಸ್ಥಾಪಕರು ಹಾಗೂ ಜಂಟಿ ಮುಖ್ಯ ಮೌಲ್ಯಮಾಪಕರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಮಂಡಳಿ ಎಚ್ಚರಿಸಿದೆ.

ಬಿಗಿ ಭದ್ರತೆ, 200 ಮೀಟರ್ ನಿಷೇಧಿತ ಪ್ರದೇಶ: ಉತ್ತರ ಪತ್ರಿಕೆಗಳ ಭದ್ರತೆಗಾಗಿ ಮೌಲ್ಯಮಾಪನ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ‘ನಿಷೇಧಿತ ಪ್ರದೇಶ’ (Restricted Zone) ಎಂದು ಘೋಷಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

  • ಕೇಂದ್ರದೊಳಗೆ ರಾಜಕೀಯ ವ್ಯಕ್ತಿಗಳು, ಮಾಧ್ಯಮದವರು ಅಥವಾ ಯಾವುದೇ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ.
  • ಯಾವುದೇ ಅಹಿತಕರ ಘಟನೆ ನಡೆಯದಂತೆ ಹಗಲು-ರಾತ್ರಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತದೆ.

ಪ್ರಾಯೋಜಕರ ಊಟ-ತಿಂಡಿಗೆ ಬ್ರೇಕ್: ಮೌಲ್ಯಮಾಪನ ಕೇಂದ್ರಗಳಲ್ಲಿ ಯಾವುದೇ ಖಾಸಗಿ ಪ್ರಾಯೋಜಕರಿಂದ (Sponsors) ಟೀ, ಕಾಫಿ, ಊಟ ಅಥವಾ ಉಪಹಾರ ಪಡೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೂ ಕೇಂದ್ರಗಳ ಬಳಿ ಖಾಸಗಿ ಲೇಖಕರು ಮತ್ತು ಪ್ರಕಾಶಕರು ಪುಸ್ತಕ ಮಾರಾಟ ಮಾಡುವುದಕ್ಕೂ ಬ್ರೇಕ್ ಹಾಕಲಾಗಿದೆ. ಕೇಂದ್ರದ ಪ್ರಾಸಂಗಿಕ ವೆಚ್ಚ ಹಾಗೂ ಲೇಖನ ಸಾಮಗ್ರಿಗಳಿಗಾಗಿ ಮಂಡಳಿಯಿಂದಲೇ ನೇರವಾಗಿ ನೆಫ್ಟ್ (NEFT) ಮೂಲಕ ಹಣ ಜಮಾ ಮಾಡಲಾಗುತ್ತದೆ.

ವೇಳಾಪಟ್ಟಿ:

  • ಏಪ್ರಿಲ್ 3 (ಬೆಳಿಗ್ಗೆ 9:00): ಮೌಲ್ಯಮಾಪನ ಕೇಂದ್ರದ ವ್ಯವಸ್ಥಾಪಕರು ಹಾಜರಾಗಬೇಕು.
  • ಏಪ್ರಿಲ್ 4 (ಬೆಳಿಗ್ಗೆ 10:30): ಜಂಟಿ ಮುಖ್ಯ ಮೌಲ್ಯಮಾಪಕರಿಗೆ ವೀಡಿಯೊ ಸಂವಾದ.
  • ಏಪ್ರಿಲ್ 5 (ಬೆಳಿಗ್ಗೆ 10:00): ಜಂಟಿ ಮತ್ತು ಉಪ ಮುಖ್ಯ ಮೌಲ್ಯಮಾಪಕರು ಹಾಜರಾಗಬೇಕು.
  • ಏಪ್ರಿಲ್ 6 (ಬೆಳಿಗ್ಗೆ 9:00): ಸಹಾಯಕ ಮೌಲ್ಯಮಾಪಕರು ಕಡ್ಡಾಯವಾಗಿ ಹಾಜರಾಗಬೇಕು.

ವರ್ಗಾವಣೆಗೊಂಡ ಶಿಕ್ಷಕರಿಗೆ ವಿಶೇಷ ಸೂಚನೆ: ಈಗಾಗಲೇ ವರ್ಗಾವಣೆಗೊಂಡಿರುವ ಶಿಕ್ಷಕರು, ಈ ಮೌಲ್ಯಮಾಪನ ಕಾರ್ಯ ಸಂಪೂರ್ಣವಾಗಿ ಮುಗಿದ ನಂತರವೇ ಬಿಡುಗಡೆಗೊಂಡು, ವರ್ಗಾವಣೆಯಾಗಿರುವ ತಮ್ಮ ಹೊಸ ಶಾಲೆಗೆ ತೆರಳಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

📰

🚨 ಯಾವುದೇ ಬ್ರೇಕಿಂಗ್ ನ್ಯೂಸ್ ಮಿಸ್ ಮಾಡ್ಕೋಬೇಡಿ!

ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ ಹಾಗೂ ದಿನನಿತ್ಯದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.