Today Gold Price 26-03: ಚಿನ್ನದ ಬೆಲೆ ಮತ್ತೆ ಏರಿಕೆ; ಕರ್ನಾಟಕದಲ್ಲಿ ಇಂದಿನ ಬಂಗಾರದ ದರ ಏಷ್ಟು??

ಚಿನ್ನದ ಬೆಲೆ ಇಳಿಯುತ್ತದೆ ಎಂದು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಇಂದು ಕೂಡ ಭಾರಿ ನಿರಾಸೆಯಾಗಿದೆ. ನಿನ್ನೆಯ ಭಾರೀ ಏರಿಕೆಯ ಬೆನ್ನಲ್ಲೇ, ಗುರುವಾರ (ಮಾರ್ಚ್ 26, 2026) ಮಾರುಕಟ್ಟೆಯಲ್ಲಿ ಬಂಗಾರದ ದರ ಸತತ ಮೂರನೇ ದಿನವೂ ಏರಿಕೆ ಕಂಡಿದೆ.

ಕೇವಲ ಮೂರು ದಿನಗಳ ಹಿಂದೆಯಷ್ಟೇ (ಸೋಮವಾರ) ದಿಢೀರ್ ಪಾತಾಳಕ್ಕಿಳಿದು ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನ, ಈಗ ಮತ್ತೆ ಹಳೆಯ ದರಕ್ಕೇ ಮರಳುತ್ತಿರುವುದು ಗ್ರಾಹಕರಿಗೆ ದೊಡ್ಡ ಹೊಡೆತ ನೀಡಿದೆ. ನಿನ್ನೆ ಮೊನ್ನೆ ಸೇರಿ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ ಬರೋಬ್ಬರಿ ₹10,100 ಹೆಚ್ಚಳವಾಗಿತ್ತು. ಇಂದೂ ಕೂಡ ಏರಿಕೆ ಹಾದಿ ಮುಂದುವರಿದಿದ್ದು, ಆಭರಣ ಖರೀದಿದಾರರಿಗೆ ಶಾಕ್ ನೀಡಿದೆ.

ಹಾಗಾದರೆ, ಸತತ ಎರಡನೇ ದಿನದ ಏರಿಕೆಯ ಬಳಿಕ ಮಾರುಕಟ್ಟೆಯಲ್ಲಿ ಇಂದಿನ ತಾಜಾ ಬಂಗಾರದ ದರ ಎಷ್ಟಿದೆ? ನಿನ್ನೆಗಿಂತ ಎಷ್ಟು ದುಬಾರಿಯಾಗಿದೆ? ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ:

Today Gold Price 26-03-2026

22 ಕ್ಯಾರೆಟ್ (ಆಭರಣ ಚಿನ್ನ) ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹200 ಏರಿಕೆಯಾಗಿದೆ.

  • 1 ಗ್ರಾಂ ಬೆಲೆ: ₹13,465 (ನಿನ್ನೆಗಿಂತ ₹20 ಏರಿಕೆ)
  • 8 ಗ್ರಾಂ ಬೆಲೆ: ₹1,07,720 (ನಿನ್ನೆಗಿಂತ ₹160 ಏರಿಕೆ)
  • 10 ಗ್ರಾಂ ಬೆಲೆ: ₹1,34,650 (ಒಟ್ಟು ₹200 ಏರಿಕೆ)

24 ಕ್ಯಾರೆಟ್ (ಶುದ್ಧ ಚಿನ್ನ) ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಇಂದು ಪ್ರತಿ 10 ಗ್ರಾಂ ಮೇಲೆ ₹220 ಹೆಚ್ಚಳವಾಗಿದೆ.

  • 1 ಗ್ರಾಂ ಬೆಲೆ: ₹14,689 (ನಿನ್ನೆಗಿಂತ ₹22 ಏರಿಕೆ)
  • 8 ಗ್ರಾಂ ಬೆಲೆ: ₹1,17,512 (ನಿನ್ನೆಗಿಂತ ₹176 ಏರಿಕೆ)
  • 10 ಗ್ರಾಂ ಬೆಲೆ: ₹1,46,890 (ಒಟ್ಟು ₹220 ಏರಿಕೆ)

18 ಕ್ಯಾರೆಟ್ (ಲೈಟ್ ವೆಯಿಟ್ ಚಿನ್ನ) ಹಗುರವಾದ ಒಡವೆಗಳ ತಯಾರಿಕೆಗೆ ಬಳಸುವ 18 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಪ್ರತಿ 10 ಗ್ರಾಂಗೆ ₹160 ದುಬಾರಿಯಾಗಿದೆ.

  • 1 ಗ್ರಾಂ ಬೆಲೆ: ₹11,017 (ನಿನ್ನೆಗಿಂತ ₹16 ಏರಿಕೆ)
  • 10 ಗ್ರಾಂ ಬೆಲೆ: ₹1,10,170 (ಒಟ್ಟು ₹160 ಏರಿಕೆ)

ಕೇವಲ ಮೂರು ದಿನಗಳ ಅಂತರದಲ್ಲಿ ಮಾರುಕಟ್ಟೆ ಊಸರವಳ್ಳಿಯಂತೆ ಬದಲಾಗುತ್ತಿದೆ. ಸೋಮವಾರ ಕೇವಲ ₹12,435 ಕ್ಕೆ ಲಭ್ಯವಿದ್ದ 1 ಗ್ರಾಂ 22 ಕ್ಯಾರೆಟ್ ಚಿನ್ನ, ಇಂದು ₹13,465 ಕ್ಕೆ ತಲುಪಿದೆ. ಅಂದರೆ ಕೇವಲ ಮೂರೇ ದಿನದಲ್ಲಿ ಪ್ರತಿ 10 ಗ್ರಾಂ ಚಿನ್ನದ ಮೇಲೆ ಒಟ್ಟು ₹10,300 ಹೆಚ್ಚಳವಾದಂತಾಗಿದೆ. ಮಾರುಕಟ್ಟೆಯ ಈ ತೀವ್ರ ಅಸ್ಥಿರತೆ ಆಭರಣ ಖರೀದಿದಾರರಲ್ಲಿ ಗೊಂದಲ ಮೂಡಿಸಿದೆ.

📰

🚨 ಯಾವುದೇ ಬ್ರೇಕಿಂಗ್ ನ್ಯೂಸ್ ಮಿಸ್ ಮಾಡ್ಕೋಬೇಡಿ!

ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ ಹಾಗೂ ದಿನನಿತ್ಯದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.